"ಧರ್ಮಣ್ಣ ಕಡೂರು" ಓರ್ವ ಕನ್ನಡ ಚಲನಚಿತ್ರ ನಟರಾಗಿದ್ದು, ರಾಮಾ ರಾಮಾ ರೇ... ಎಂಬ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. == ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನಲೆ == ೧೯೮೪ರ ಫೆಬ್ರವರಿ ಎಂಟನೇ ತಾರೀಕಿನಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ, ಹನುಮಣ್ಣ ಹಾಗೂ ಮಲ್ಲಮ್ಮ ದಂಪತಿಗಳಿಗೆ ಜನಿಸಿದರು. ಕುವೆಂಪು ವಿಶ್ವವಿದ್ಯಾನಿಲಯದಿಂದ ಪದವಿ ಹಾಗೂ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರ ಪತ್ನಿಯ ಹೆಸರು ಕಾವ್ಯ. ಶಶಾಂಕ್‌ ಹಾಗೂ ಹಂಸಿಕಾ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. == ವೃತ್ತಿಜೀವನ == ಕಡೂರಿನಲ್ಲಿ ಪದವಿ ಓದುತ್ತಿದ್ದ ಸಂದರ್ಭದಿಂದಲೂ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಬಳಿಕ ಯಶವಂತ ಸರದೇಶಪಾಂಡೆಯವರ ನಾಟಕ ತಂಡದಲ್ಲಿ ನಟರಾಗಿ ದೇಶ ಹಾಗೂ ವಿದೇಶಗಳಲ್ಲಿ ಪ್ರದರ್ಶನ ನೀಡಿದರು. ಈ ನಾಟಕಗಳಲ್ಲಿ ಪ್ರಮುಖವಾದವು,"ತೆರೆಗಳು" "ಒಂದು ಬೊಗಸೆ ನೀರು", "ಕಲ್ಕಿ", "ಜಲಗಾರ", "ಆಲ್ ದಿ ಬೆಸ್ಟ್", "ಸಹೀ ರೀ ಸಹೀ", "ಹಿಂಗಾದ್ರ ಡಾಟ್ ಕಾಮಿಡಿ", "ಒಂದ್ ಆಟ ಭಟ್ಟರದ್ದು" ಮುಂತಾದವು. ಬಳಿಕ "ಜಯನಗರ ಫೋರ್ತ್ ಬ್ಲಾಕ್" ಹಾಗೂ "ಐ ಲವ್ ಯು" ಎಂಬ ಕನ್ನಡ ಕಿರುಚಿತ್ರಗಳಲ್ಲಿ ನಟಿಸಿದರು. "ಐ ಲವ್ ಯು" ಕಿರುಚಿತ್ರವು ಫ್ರಾನ್ಸ್ ನ ಕಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. == ಚಲನಚಿತ್ರಗಳ ಪಟ್ಟಿ == ಧರ್ಮಣ್ಣ ತಮ್ಮ ವೃತ್ತಿ ಜೀವನದಲ್ಲಿ ನಟಿಸಿರುವ ಚಲನಚಿತ್ರಗಳ ಪಟ್ಟಿ ಹೀಗಿದೆ: , == ಉಲ್ಲೇಖಗಳು ==